WhatsApp ಮೂಲಕ ಸಂಪರ್ಕಿಸಿ
ಹಣ ಹಣಿ : ಮಡಿಲಿನಿಂದ ಮಣ್ಣಿನವರೆಗೆ(ರಂಗಸ್ವಾಮಿ ಮೂಕನಹಳ್ಳಿ) - Hana Hani : Madilininda Manninavarege(Rangaswamy Mookanahalli)

ಹಣ ಹಣಿ : ಮಡಿಲಿನಿಂದ ಮಣ್ಣಿನವರೆಗೆ(ರಂಗಸ್ವಾಮಿ ಮೂಕನಹಳ್ಳಿ) - Hana Hani : Madilininda Manninavarege(Rangaswamy Mookanahalli)

  • Product Code: XN-HH-RM
  • Availability: In Stock
  • ₹270.00
  • ₹243.00



ನಾವು ಕ್ರಿಕೆಟ್‌, ಚೆಸ್‌, ಕಬಡ್ಡಿ, ಹೀಗೆ ಹಲವಾರು ಆಟಗಳನ್ನು ನೋಡಿದ್ದೇವೆ, ಆಡಿದ್ದೇವೆ. ಆ ಆಟಗಳಿಗೆ ನಿಯಮಾವಳಿಗಳಿವೆ. ನಿಯಮವನ್ನು ಸರಿಯಾಗಿ ತಿಳಿದುಕೊಂಡವರು, ಶ್ರದ್ಧೆಯಿಂದ ಆಟವನ್ನು ಪ್ರಾಕ್ಟೀಸ್‌ ಮಾಡಿದವರು ಆಟದಲ್ಲಿ ಮೇಲುಗೈ ಸಾಧಿಸುವುದು ಸಹಜ. ಬದುಕು ಕೂಡ ಥೇಟ್‌ ಹೀಗೇ ಕಣ್ರೀ, ಇಲ್ಲೂ ನಿಯಮಾವಳಿಗಳಿವೆ. ಅದನ್ನು ಎಷ್ಟು ಬೇಗ ಅರಿತುಕೊಳ್ಳುತ್ತೇವೆ ಅಷ್ಟು ನಮಗೆ ಒಳ್ಳೆಯದು. ಈ ರೀತಿಯ ಹುಟ್ಟಿನಿಂದ-ಸಾವಿನವರೆಗೆ ಮನುಷ್ಯನ ಜೀವನದಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರಗಳಿಗೆ ಒಂದು ಔಟ್‌ ಲೈನ್‌ ಅಥವಾ ಒಂ��ು ಸ್ಟ್ಯಾಂಡರ್ಡ್‌ ಪ್ಯಾರಾಮೀಟರ್‌, ಪರಿಧಿಯನ್ನು ಇಲ್ಲಿಯವರೆಗೆ ಯಾರೂ ಹೇಳಿಲ್ಲ. ಏಕೆಂದರೆ ಬದುಕು ಎರಡು ಪ್ಲಸ್‌ ಎರಡು ನಾಲ್ಕಕ್ಕೆ ಸಮ ಎನ್ನುವಷ್ಟು ಸರಳವಲ್ಲ. ಆದರೆ ಬಹುಪಾಲು ಸಮಯ ನಾವು ಎಲ್ಲಕ್ಕೂ ಪ್ಯಾರಾಮೀಟರ್‌ ಸೆಟ್‌ ಮಾಡಬಹುದು. ವೈದ್ಯಕೀಯ ವಿಜ್ಞಾನದಲ್ಲಿ ಬಿಪಿ, ಶುಗರ್‌, ಪ್ಲೇಟ್ಲೆಟ್‌ ಇಷ್ಟಿರಬೇಕು ಎನ್ನುವ ಪ್ಯಾರಾಮೀಟರ್‌ ಇದೆ. ಅದೇ ರೀತಿ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳಲು ಒಂದು ಪ್ಯಾರಾಮೀಟರ್‌ ಸೃಷ್ಟಿಸುವ ಪ್ರಯತ್ನ ಈ ಪುಸ್ತಕದಲ್ಲಿ ಮಾಡಿದ್ದೇನೆ. ಹೇಗೆ ಬಿಪಿ, ಶುಗರ್‌ ಅವರು ಹೇಳಿದಷ್ಟು ಎಲ್ಲರಲ್ಲೂ ಇರುವುದಿಲ್ಲವೋ ಹಾಗೆಯೇ ಇಲ್ಲಿ ನಾನು ಹೇಳಿರುವ ಪ್ಯಾರಾಮೀಟರ್‌ ಕೂಡ ನಿಮ್ಮ ಬದುಕಿನ ಲೆಕ್ಕಾಚಾರಕ್ಕಿಂತ ಭಿನ್ನವಾಗಿರಬಹುದು. ಇಲ್ಲಿ ಹೇಳಿರುವುದು ಒಂದು ಸ್ಟ್ಯಾಂಡರ್ಡ್‌ ಪರಿಧಿ. ಇದರ ಸುತ್ತಮುತ್ತವದ್ದಿರೆ ಅಷ್ಟರಮಟ್ಟಿಗೆ ನಮ್ಮ ಬದುಕು ಸರಾಗ. “Lose an hour in the morning, and you will be all day hunting for it”-ಎನ್ನುವ ಮಾತಿದೆ. ಅರ್ಥ ಅರ್ಲಿ ಸ್ಟಾರ್ಟ್‌ (early start) ಬದುಕಿಗೆ ಭದ್ರ ಅಡಿಪಾಯ ಹಾಕಿಕೊಡುತ್ತದೆ. ಈ ಸತ್ಯ ಬೇಗ ಅರಿತುಕೊಳ್ಳುವ, ಅಳವಡಿಸಿಕೊಳ್ಳುವ ಆಯ್ಕೆ ನಮ್ಮದು.

There are no reviews for this product.

Write a review

Note: HTML is not translated!
Bad           Good