ವ್ಯಾಸ ಸಂದರ್ಶನ(ಜಗದೀಶಶರ್ಮಾ ಸಂಪ) - Vyasa Sandarshana(Jagadisha Sharma Sampa)
- Product Code: XN-VYS-SND-JGD
- Availability: In Stock
- ₹150.00
₹135.00
ಒಬ್ಬ ವ್ಯಕ್ತಿ ಒಂದು ಬದುಕಿನಲ್ಲಿ ಏನೆಲ್ಲ ಮಾಡಬಹುದು? ಎಂದು ಕೇಳಿದರೆ ವ್ಯಾಸರನ್ನು ನೋಡಿ ಎನ್ನುತ್ತೇನೆ. ಅಷ್ಟು ಕೆಲಸ ಅವರದ್ದು! ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಎಲ್ಲರಿಗೂ ಬೇಕಾಗುವಂತೆ ಆದವರು ಅವರು. ಜಗತ್ತು ಅವರನ್ನು ಕರೆದು ಅನುಗ್ರಹ ಮಾಡಿಸಿಕೊಂಡದ್ದಿಲ್ಲ; ಅವರೇ ಹೋಗಿ ಹೋಗಿ ಒಳಿತು ಮಾಡಿದವರು. ಇಷ್ಟಾರು ರಚನೆಗೆ ಅವರಿಗೆ ಯಾರೂ ಸೂಚಿಸದ್ದಿಲ್ಲ; ಅವರೇ ಯೋಜಿಸಿ ಬರೆದರು. `ಒಳಿತು ಮಾಡುವುದು ಕರ್ತವ್ಯ; ಮಾಡುತ್ತಾ ಸಾಗುತ್ತೇನೆ' ಎಂಬ ವಿಶ್ವಹಿತದ ಭಾವ ಅವರದ್ದು. ಅವರು ಕೋಪಗೊಂಡದ್ದಿಲ್ಲ, ಶಾಪ ಕೊಟ್ಟದ್ದಿಲ್ಲ, ಬೈದಿದ್ದಿಲ್ಲ; ಭಂಗಿಸಿದ್ದಿಲ್ಲ. ಆದರೆ ಅದೆಷ್ಟು ಜನರ ಬದುಕಿನ ಓರೆಕೋರೆ ತಿದ್ದದ್ದಿರು! ಲೋಕ ಸದಾ ತನ್ನ ಓರೆಕೋರೆಯನ್ನು ನೋಡಿ ತಿದ್ದಿಕೊಳ್ಳಲು ಬೇಕಾಗುವ ಕನ್ನಡಿಯಂಥ ಕೃತಿಗಳನ್ನು ಕೊಟ್ಟರು. * ವ್ಯಾಸರೊಡನೆಯ ಒಂದು ಸಂವಾದ ಇಲ್ಲಿದೆ. ವಾದವೆಂದರೆ ಮಾತು. ಅವರು ಮಾತಿನ ಮೇರು; ವಾಙ್ಮಯದ ಚಕ್ರವರ್ತಿ. ಅವರ ಮಾತೆಲ್ಲ ಸುವಾದವೇ, ಸಂವಾದವೇ. ಏಕೆ ಮಾತಾಡಬೇಕೋ ಅದಕ್ಕಾಗಿ; ಹೇಗೆ ಮಾತಾಡಬೇಕೋ ಹಾಗೆ ಮಾತಾಡಿ ತೋರಿಸಿದವರು ಅವರು. ಅವರ ಮಾತೂ, ಅವರ ಮಾತಿನ ವಿಧಾನವೂ ಮಾದರಿಯಾದರೆ ಈ ಮಾತುಗಳಿಗೆ ಸಾರ್ಥಕತೆ.

