WhatsApp ಮೂಲಕ ಸಂಪರ್ಕಿಸಿ
ಜಾಂಗುಲಿಕ(ಡಾ| ಕಿರಣ್ ವಿ.ಎಸ್) - Jaangulika(Dr. Kiran V.S)

ಜಾಂಗುಲಿಕ(ಡಾ| ಕಿರಣ್ ವಿ.ಎಸ್) - Jaangulika(Dr. Kiran V.S)

  • Product Code: Jaangulika
  • Availability: In Stock
  • ₹575.00
  • ₹500.00



ಕನ್ನಡಕ್ಕೆ ಹೊಸಬಗೆಯ ಮೆಡಿಕಲ್ ಮಿಸ್ಟರಿ

 

ಆಸ್ಪತ್ರೆಗೆ ಬರುವವರಲ್ಲೂ ಕಥೆಗಳಿರುತ್ತವೆ, ಆಸ್ಪತ್ರೆಯ ಒಳಗೂ ಕಥೆಗಳಿರುತ್ತವೆ. ಬರಿಗಣ್ಣಿಗೆ ಕಾಣದ ಅಂಥ ರಹಸ್ಯಗಳನ್ನು ಮತ್ತು ಅಪರಾಧ ಕೃತ್ಯಗಳನ್ನು ಚಾಣಾಕ್ಷ ಡಾಕ್ಟರೊಬ್ಬರು ಹೊರಕೆಳೆಯುವ ಒಂಬತ್ತು ಚಂದದ ಕಥೆಗಳು ಈ ಕೃತಿಯಲ್ಲಿವೆ. ಯಾರದ್ದೋ ತಪ್ಪಿಗಾಗಿ ಇನ್ಯಾರದೋ ಪ್ರಾಣ ಹೋಗುವ ಹಂತದಲ್ಲಿ ‘ಯಮನ ದವಡೆಯಿಂದ ಪಾರುಮಾಡಬಲ್ಲ’ ಡಾ। ವೈದ್ಯರು ಮೆಲ್ಲಗೆ ಬರುತ್ತಾರೆ. ಮನುಷ್ಯ ಶರೀರದ ಒಳಗಿನ ಮಂಡಲಗಳನ್ನೂ ಔಷಧಗಳ ಕರಾಮತ್ತನ್ನೂ ತೋರಿಸುತ್ತಲೇ ಮುಂದಿನ ಕಥನಗಳೆಲ್ಲ ತೆರೆದುಕೊಳ್ಳುತ್ತ ಹೋಗುತ್ತದೆ. ನಮಗೆ ಗೊತ್ತಿರದ ವಿಲಕ್ಷಣ ವೈದ್ಯಕೀಯ ಸಂಗತಿಗಳು, ಹೈಟೆಕ್ ಆಸ್ಪತ್ರೆಗಳ ಒಳಗೆ ಬಚ್ಚಿಟ್ಟ ಅಕ್ರಮ-ಅವಾಂತರಗಳು ಮುಖವಾಡ ಕಳಚಿ ಹೊರಬರುತ್ತವೆ. ಕಲ್ಪನೆ ಮತ್ತು ವಾಸ್ತವಗಳ ಹದ ಮಿಶ್ರಣದ ಪತ್ತೇದಾರಿ ಕಥಾಮಾಲಿಕೆ ಇದು.

ವೈದ್ಯಲೋಕದ ಸೋಜಿಗಗಳ ಬಗ್ಗೆ ಈಗಾಗಲೇ ‘ಸೆರೆಂಡಿಪಿಟಿ’ ಎಂಬ ಅದ್ಭುತ ಕೃತಿಯನ್ನು ಕೊಟ್ಟ ಡಾ। ಕಿರಣ್ ವಿ.ಎಸ್. ತಮ್ಮ ಹೃದಯಾಳದಲ್ಲಿ ಸಾಹಿತ್ಯಕ ಶೈಲಿಯನ್ನೂ ಪೋಷಿಸಿಕೊಂಡಿದ್ದಾರೆ. ಕನ್ನಡಕ್ಕೆ ಅಪರೂಪದ್ದೆನಿಸುವ ವೈದ್ಯಕೀಯ ಪತ್ತೇದಾರಿ ಕಥನವಿಧಾನವನ್ನು ಓದುಗರಿಗೆ ಪರಿಚಯಿಸುವ ‘ಜಾಂಗುಲಿಕ’ ಈಗ ನಿಮ್ಮ ಕೈಯಲ್ಲಿದ್ದಾನೆ; ಕನ್ನಡ ಸಾಹಿತ್ಯಕ್ಕೆ ಕೋಲ್ಮಿಂಚಿನ ಹೊಸ ಧರೆಯೊಂದನ್ನು ಸೇರಿಸಿದ್ದಾನೆ.

ನಾಗೇಶ ಹೆಗಡೆ

There are no reviews for this product.

Write a review

Note: HTML is not translated!
Bad           Good