WhatsApp ಮೂಲಕ ಸಂಪರ್ಕಿಸಿ
LTTE ಮೂರ್ತಿ Calling(ಶಿವಕುಮಾರ್ ಮಾವಲಿ) - LTTE Murthy Calling(Shivakumar Mavali)

LTTE ಮೂರ್ತಿ Calling(ಶಿವಕುಮಾರ್ ಮಾವಲಿ) - LTTE Murthy Calling(Shivakumar Mavali)

  • Product Code: XN-LT-SM
  • Availability: In Stock
  • ₹120.00
  • ₹108.00



LTTE Murthy ಕಾಲಿಂಗ್ … ಒಂದು ತಿಂಗಳ ಹಿಂದೆ ಜಮೀಲ್ ಸರ್ ಫೋನ್ ಮಾಡಿದ್ದರು. ಸರ್ ಫೋನ್ ಮಾಡಿದರೆ ಹೊಸ ಪುಸ್ತಕದ ಬಗ್ಗೆ ಮಾತಾಡುತ್ತಾರೆ. ಹೊಸ ಐಡಿಯಾ, ಹೊಸ ಕವರ್ ಪೇಜ್ ಇಂಥದ್ದೇ ಇರುತ್ತದೆ. ಮೆಲ್ಲಗೆ, “ನಿಮ್ಮ ಪುಸ್ತಕದ ಕಥೆ ಏನೂ?” ಎಂದು ಸಹ ಕೇಳಿ ಎಚ್ಚರಿಸುತ್ತಾರೆ. ಇಂಥದ್ದೇ ಒಂದು ಸುಸಂದರ್ಭದಲ್ಲಿ ಹೊಸ ಪುಸ್ತಕದ ಟೈಟಲ್ ಎಂದು ಹೇಳಿದರು. ನಾನು ಒಮ್ಮೆ ಬೆಚ್ಚಿಬಿದ್ದೆ. “ಇದೇನ್ ಸಾರ್, ಇದ್ಯಾರು ಸರ್” ಎಂದು ಕೇಳುತ್ತಿದ್ದೆ. “ಸೀಕ್ರೆಟ್ ಮೇಡಮ್” ಎಂದು ನಕ್ಕುಬಿಟ್ಟರು. ಆಮೇಲೆ ಜಮೀಲ್ ಸರ್ ���ೆ ಪುಸ್ತಕ ರತ್ನ ಪ್ರಶಸ್ತಿ ಬಂದ ಸಮಾರಂಭದಲ್ಲಿ ಶಿವಕುಮಾರ್ ಮಾವಲಿಯವರು ಮಾತಾಡುತ್ತಾ , “ನಾಳೆ ನಾನು ನಿಮ್ಮ ಜಯನಗರಕ್ಕೆ ಬರ್ತೀನಿ, ಜಮೀಲ್ ಸರ್ ಆಫೀಸಲ್ಲಿ ರೀಡಿಂಗ್ ಇದೆ” ಎಂದು ಹೇಳಿದಾಗ, “ಓಹ್ ಈ LTTE Murthy calling ಇವರ ಪುಸ್ತಕವೇ” ಎಂದು ತಾಳೆ ಹಾಕಿಕೊಂಡೆ. ಪೊಲೀಸ್, ತನಿಖೆ ಎಂದೆಲ್ಲಾ ಅಷ್ಟೇ ಜಮೀಲ್ ಸರ್ ಹೇಳಿದ್ದು, ನಾನು ಸ್ವಲ್ಪ ತಲೆ ಓಡಿಸಿ ಯಾರು ಬರೆದಿರಬಹುದು ಎಂದು ಯೋಚಿಸುತ್ತಿದ್ದೆ. ಇಂಗ್ಲೀಷ್ ಪಾಠ ಮಾಡೋ ಮೇಷ್ಟ್ರಿಗೂ, ಸಕ್ಕತ್ ಕನ್ನಡ ಪುಸ್ತಕ ಪ್ರಕಟ ಮಾಡೋ ಪ್ರಕಾಶಕರಿಗೂ ಈ LTTEಗೂ ಏನ್ ಸಂಬಂಧ ಎಂದು ಯೋಚನೆ ಮಾಡುತ್ತಿದ್ದೆ. 1991ರಲ್ಲಿ ಹತ್ಯೆಯಾದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಬಗ್ಗೆ ಮತ್ತು ಅದರ ಪ್ಲಾನ್ ಮಾಡಿದ ಆರೋಪಿಗಳ ಬಗ್ಗೆ ಬಹಳ ಕೇಳಿದ್ದೆವು. ನಾವೆಲ್ಲಾ 1991 born kids ಆದ್ದರಿಂದ ಅದೇ ತಿಂಗಳಲ್ಲಿ ಹುಟ್ಟಿದ್ದರಿಂದ ಹೆರಿಗೆ ಸಂದರ್ಭದಲ್ಲಿ ಕೆಲವು ತೊಂದರೆಗಳಾಗಿದ್ದವು, ಕಾರು ಸಿಗದೆ, ಆಟೋಗಳು ಸಿಗದೆ ಎಂಬ ಕಥೆಗಳೆನ್ನೆಲ್ಲಾ ಅಮ್ಮಂದಿರು ಹೇಳುತ್ತಿದ್ದರು. ಇನ್ನು ಮಿಕ್ಕಂತೆ ಕನ್ನಡದಲ್ಲಿ ಸೈನೇಡ್ ಎಂಬ ಸಿನಿಮಾ ಬಂದಿತ್ತು ಅದಾದ ಮೇಲೆ ಫ್���ಾಮಿಲಿ ಮ್ಯಾನ್ - 2 ನಲ್ಲಿ ಈ ಸಂಸ್ಥೆಯ ಬಗ್ಗೆ ಕೆಲವಾರು ಮೇಕರ್ಸ್ ಗಳ ಸಿದ್ಧಾಂತದಂತೆ ತೋರಿಸಿದ್ದಾರೆ. ಆದರೆ ನಮ್ಮಂತಹ ಸಾಮಾನ್ಯ ಜನಕ್ಕೆ ಈ ಕಥೆ ಸಹವಾಸ ಯಾಕೆ ಬೇಕು ಎಂದು ಅಂದುಕೊಳ್ಳುತ್ತಲೇ ಇದ್ದೆ. ಸುಮ್ಮನೆ ನನಗೇ ತಡೆದುಕೊಳ್ಳೋಕೆ ಆಗದೇ ಈ LTTE murthy ಯಾರು ಎಂದು ಗೂಗಲ್ ಮಾಡಿದೆ. ಸರಿಯಾದ ಮಾಹಿತಿ ಸಿಗಲ್ಲಿಲ್ಲ ಸುಮ್ಮನಾದೆ. ಆಮೇಲೆ ಒಂದು ದಿನ ಮಾಸ್ ಸಿನಿಮಾದ ಟೀಸರ್ ಹಾಗೆ ಸಾವಣ್ಣ ಪ್ರಕಾಶನ ಒಂದು ವಿಡಿಯೋ ಬಿಟ್ಟಿತು. ಇವರೆಲ್ಲಾ ಹೀರೋಗಳ ಹಾಗೆ ಬಂದರು. ನಾನು ಹೌಹಾರಿದೆ. “ವಿಕ್ರಮ್ ಸಿನಿಮಾ ಚೆನ್ನಾಗಿದೆ ನೋಡಿ ಅಂದಿದ್ದ ಸರ್ ಇದೇನೊಳ್ಳೆ ಹೀಗ್ ಆಡ್ತಿದಾರೆ” ಎಂದು ಅಮ್ಮನಿಗೆ ಹೇಳುತ್ತಿದ್ದೆ. ಆಮೇಲೆ ಫೋನ್ ಮಾಡಿ, “ಎರಡು ದಿನದಲ್ಲಿ ಪುಸ್ತಕ ಬರುತ್ತದೆ” ಅಂದರು. ಬಂತು, ಬಂದ 2 ಘಂಟೆಯಲ್ಲಿ ಪುಸ್ತಕ ಮುಗಿಯಿತು ಸೀರೀಸ್ ಗಳನ್ನ ನೋಡಿ ಥ್ರಿಲ್ ಅನುಭವಿಸುತ್ತಿದ್ದ ನನ್ನ ಕಾಲದವರಿಗೆ ಒಂದು 96 ಪುಟಗಳ ಪುಸ್ತಕ ಬಹಳ ಥ್ರಿಲ್ ಕೊಡುತ್ತದೆ ಎಂಬುದು ನಂಬಲಸಾಧ್ಯದ ಕೆಲಸ. ಆದರೆ ಅಂತಹ ಅನುಭವ ಖಂಡಿತ ಆಗುತ್ತದೆ, ಅರ್ಪಣೆಯ ಸಾಲುಗಳೇ ಅದ್ಭುತ, ತಪ್ಪು ಮಾಡದವರು , ಇನ��ನ್ಯಾರದೋ ತಪ್ಪಿಗೆ ಕೋರ್ಟು ಕಛೇರಿಗೆ ಅಲೆಯುತ್ತಿರುವವರ ಪಡಿಪಾಟಲನ್ನ ಯಾರೂ ಅರಿಯಲು ಸಾಧ್ಯವಿಲ್ಲ. ಇಂತಹ ಕ್ಯಾರೆಕ್ಟರ್ ಮೂರ್ತಿ ಅವರು. ಒಂದು ದಿನ ಅಚಾನಕ್ಕಾಗಿ ಬೆಳಗ್ಗೆ ಬೆಳಗ್ಗೆ ಮನೆಗೆ ಪೊಲೀಸರು ಬಂದರೆ ಇನ್ನೆಷ್ಟು ಭಯವಾಗಬೇಡ. ಅದರ ಜೊತೆ ಕಾಸಿಗೊಂದು ಕೊಸರಿಗೊಂದು ಮಾತಾಡುವ ಅಕ್ಕ ಪಕ್ಕದ ಮನೆಯವರ ಕಾಟ ತಡೆದುಕೊಳ್ಳುವುದೂ ಕಷ್ಟ. ಇನ್ನು ಪೊಲೀಸರ ಕಡೆಯಿಂದ ನೋಡಿದರೆ ರಾಜೀವ್ ಗಾಂಧಿಯ ಹತ್ಯೆ ಒಂದು ಹೈ ಫ್ರೊಫೈಲ್ ಕೇಸ್ , ಲೋಕಲ್ ಪೊಲೀಸಿನವರಿಗೆ ಅದು ಬಹಳ ಸ್ಟ್ರೆಸ್ ಕೊಡುತ್ತದೆ. ಅದರಲ್ಲಿ ಆರೋಪಿಗಳನ್ನ ಹಿಡಿಯಬೇಕು, ಅಥವಾ ಅವರ ಜಾಡನ್ನು ಹಿಡಿಯಬೇಕು ಎಂದರೆ ಅವರ ತಲೆಯೂ ಕೆಟ್ಟುಹೋಗಿರುತ್ತದೆ. ಇಂತಹ ವಿರೋಧಾಭಾಸಗಳ ನಡುವೆ ಒಂದು ರೋಚಕ ಥ್ರಿಲ್ಲರ್ ಕಥೆ ಹೇಳೋದು ಕಷ್ಟವೇ, ಯಾರ ಪರವಾಗಿಯೂ ನಿಲ್ಲದೆ, ಕಥೆ ಮಾತ್ರ ಹೇಳಬೇಕಾದರೆ ಎಷ್ಟು ಸಂಯಮ ಬೇಕು, ಎಷ್ಟು ಪಳಗಿರಬೇಕು ಬರಹಗಾರರು ಎಂದು ತೋರಿಸುತ್ತದೆ. ಖಂಡಿತಾ ಓದುಗರು ಈ ಪುಸ್ತಕ ಕೈಗೆತ್ತಿಕೊಳ್ಳಿ, ಒಂದು ಥ್ರಿಲ್ಲಿಂಗ್ ಅನುಭವ ನಿಮ್ಮದಾಗುತ್ತದೆ.

There are no reviews for this product.

Write a review

Note: HTML is not translated!
Bad           Good