WhatsApp ಮೂಲಕ ಸಂಪರ್ಕಿಸಿ
ಅದೇ ಊರು ಅದೇ ಮರ(ಕೆ ಶಿವರಾಮ ಕಾರಂತ) - Ade Uru Ade Mara(K Shivarama Karantha)

ಅದೇ ಊರು ಅದೇ ಮರ(ಕೆ ಶಿವರಾಮ ಕಾರಂತ) - Ade Uru Ade Mara(K Shivarama Karantha)

  • Product Code: XN-AUAM-SK
  • Availability: In Stock
  • ₹220.00
  • ₹198.00



ಅದೇ ಊರು, ಅದೇ ಮರ-ಈ ಕಾದಂಬರಿಯನ್ನು ಡಾ. ಕೆ. ಶಿವರಾಮ ಕಾರಂತರು ರಚಿಸಿದ್ದಾರೆ. ವಟಪುರವೆಂಬ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಹಳ್ಳಿ ಸ್ವಾತಂತ್ಯ್ರಪೂರ್ವದಿಂದ ಸ್ವಾತಂತ್ಯ್ರ ನಂತರದ ನಾಲ್ಕೈದು ದಶಕಗಳಲ್ಲಿ ಯಾವೆಲ್ಲ ಸ್ಥಿತ್ಯಂತರಗಳನ್ನು ಹಾಗೂ ಮೂರು ತಲೆಮಾರುಗಳಲ್ಲಿ ಜನಜೀವನದ ಮೌಲ್ಯಗಳಲ್ಲಿ ಉಂಟಾದ ಕಾಲಕಾಲದ ಬದಲಾವಣೆಯನ್ನುಕಂಡಿತು ಎಂಬುದರ ಚಿತ್ರಣವಿದೆ. ಆ ಊರಿನ ಹೆಸರಿಗೆ ಕಾರಣವಾದ ವಟವೃಕ್ಷ ಪುರಾತನ ವೈಭವವನ್ನು ಸಾರುತ್ತದೆ. ಒಂದು ಎಕರೆ ಜಮೀನನ್ನು ಆವರಿಸುವಷ್ಟು ಜಾಗದಲ್ಲಿ ಪಕ್ಷಿಗಳಿಗೆ ನಿಶ್ಚಿಂತ ಆವಾಸವನ್ನೂ ಒದಗಿಸುತ್ತದೆ. ವಟಪುರದ ತಲೆಮಾರಿನ ಜನರು ದಾನ, ಧರ್ಮ , ದೇವರು, ನಂಬಿಕೆಗಳ ನೆರಳಿನಲ್ಲಿ ಬದುಕನ್ನು ಸಾಗಿಸುತ್ತಾರೆ. ಊರಿಗೆ ಆಪತ್ತು ಬಂದಾಗ ಜಾತಿ, ಮತ , ಬಡವ, ಶ್ರೀಮಂತರೆನ್ನದೆ ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸುತ್ತಾರೆ. ಹೀಗೆ ವಟಪುರದ ಮುಂದಿನ ತಲೆಮಾರಿನ ಕಥೆ ಈ ಕಾದಂಬರಿಯು ಹೇಳುತ್ತ ಸಾಗುತ್ತದೆ. ಒಂದು ದಿನ ಗೋಳಿಮರದ ಅಳಿದುಳೀದ ಕಾಂಡ, ಬೇರುಗಳೂ ಕಣ್ಮರೆಯಾಗುತ್ತವೆ. ಅಲ್ಲೊಂದು ಆಲದ ಮರ ಇತ್ತು ಎಂಬುದರ ಗುರುತೇ ಇರುವುದಿಲ್ಲ. ಸಂಜೆಯ ಹೊತ್ತು ನಾಲ್ವರು ಮುದುಕರು ಈ ಸ್ಥಳಕ್ಕೆ ಬಂದು ಶಾಪ ಹಾಕುತ್ತಾರೆ. ಅವುಗಳನ್ನು ಕಡಿದು ಹೊತ್ತೊಯ್ದವರ ಸುಳಿವು ಸಿಗದು. ಕಾಲಕ್ರಮೇಣ ಅವನತಿಗೆ ಸಾಗುತ್ತಿರುವ ಇಂದಿನ ತಲೆಮಾರಿನ ಜನತೆಯ ಸ್ಪಷ್ಟ ಚಿತ್ರಣ ನೀಡುತ್ತದೆ ಈ ಕಾದಂಬರಿ. ಬೆಂಗಳೂರಿನ ರಾಜಲಕ್ಷ್ಮಿ ಪ್ರಕಾಶನವು 1977ರಲ್ಲಿ (ಪುಟ: 329) ಈ ಕಾದಂಬರಿಯನ್ನು ಮೊದಲು ಪ್ರಕಟಿಸಿತ್ತು.

There are no reviews for this product.

Write a review

Note: HTML is not translated!
Bad           Good