ಅಂಟಿದ ಅಪರಂಜಿ(ಕೆ ಶಿವರಾಮ ಕಾರಂತ) - Antida Aparanji(K Shivarama Karantha)
- Product Code: XN-AA-SK
- Availability: In Stock
- ₹160.00
₹144.00
ಖ್ಯಾತ ಚಿಂತಕ ಡಾ. ಕೆ. ಶಿವರಾಮ ಕಾರಂತರ ಕಾದಂಬರಿ-ಅಂಟಿದ ಅಪರಂಜಿ. ಇದು ಅವರ ಕೊನೆಯ ಕಾದಂಬರಿ ಎಂದು ಹೇಳಲಾಗುತ್ತದೆ. ಧಾರ್ಮಿಕ ಮತ್ತು ಸಾಮಾಜಿಕ ರಂಗಗಳಲ್ಲಿಯ ನೈತಿಕ ಅಧಃಪತನವನ್ನು ವಿವರಿಸುತ್ತದೆ. ಮಾತಿನಿಂದ ಜನರನ್ನು ಮರಳು ಮಾಡುವ, ಮುಖವಾಡ ಧರಿಸಿ ವಂಚಿಸುವ, ಸ್ವಲಾಭಕ್ಕಾಗಿ ಮಾತ್ರ ಉಪಾಯಗಳನ್ನು ಮಾಡುವ ಜನರ ಚಟುವಟಿಕೆಗಳ ಚಿತ್ರಣವಿದೆ. ಹಯವದನ ಎಂಬ ಪಾತ���ರವನ್ನು ಕೇಂದ್ರವಾಗಿಸಿಕೊಂಡು ಕಾದಂಬರಿಯು ತನ್ನ ಉದ್ದೇಶವನ್ನು ಸಾಧಿಸುತ್ತದೆ. ಈತ ಮುಖವಾಡಗಳನ್ನು ಧರಿಸುತ್ತಾ, ತಾನು ಏನಿಲ್ಲವೋ ಅದನ್ನೇ ಇದ್ದೇನೆಂದು ಪ್ರದರ್ಶಿಸುವುದು ಆತನ ಜಾಯಮಾನ. ಅದ್ಭುತವಾಗಿ ಉಪದೇಶ ನೀಡುತ್ತಾನೆ. ಲೋಕದ ಉದ್ದಾರಕ್ಕೆ ತಮ್ಮ ಜೀವನ ಮುಡುಪು ಎಂದೂ ಜನರನ್ನು ನಂಬಿಸುತ್ತಾನೆ. ನುಡಿಮಂಗಲೆಯಲ್ಲಿ ಒಂದು ದೇಗುಲ ಕಟ್ಟಿಸಿ ತಾನೊಬ್ಬ ದೊಡ್ಡ ಧಾರ್ಮಿಕ ವ್ಯಕ್ತಿ ಎಂಬಂತೆ ಪ್ರದರ್ಶನ ನೀಡುತ್ತಾನೆ. ಹುಬ್ಬಳ್ಳಿಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಈತ ನಂತರ ನುಡಿಮಂಗಲಕ್ಕೆ ಬಂದು ಅಲ್ಲಿಯ ಕಾಲೇಜಿನಲ್ಲಿ ಸೇರಿಕೊಂಡು, ಹಾಸ್ಟೆಲ್ , ಆಟದ ಸಾಮಾನು ಖರೀದಿ, ವಿಜ್ಞಾನ ಸಮ್ಮೇಳನ ಇತ್ಯಾದಿ ನೆಪದಲ್ಲಿ ಸಾಕಷ್ಟು ದುಡ್ಡು ಜೇಬಿಗೆ ಇಳಿಸುತ್ತಾನೆ. ಸಾಕಷ್ಟು ಕೀರ್ತಿ, ಹಣ ಸಂಪಾದಿಸುವ ಹಯವದನನನ್ನು ಜನ ಮಾತ್ರ ಸಂಶಯದೃಷ್ಟಿಯಿಂದಲೇ ನೋಡುವಂತಾಗುತ್ತದೆ. ‘ಅವನಿಗೆ ನುಂಗುವುದೊಂದೇ ಗೊತ್ತು. ಪ್ರತಿ ಬಾರಿಯೂ ಹೊಸ ಯೋಜನೆಗಳನ್ನು ರೂಪಿಸುತ್ತಾನೆ. ಅದರ ಉದ್ದೇಶ ಒಂದೇ: ಹಣ ನುಂಗುವುದು. ಊರಿಗೆ ಅಂಟಿದ ಅಪರಂಜಿ ಅವನು. ಅಂತವರು ತಮ್ಮ ಆರಾಧ್���ನೋ, ಆದರ್ಶನೋ, ಆಪ್ತನೋ ಆಗಬೇಕೆಂದು ಬಯಸುವವರು ಅಂತರಂಗವೂ ಅವನದೇ ರೀತಿಯನ್ನು ಹಂಬಲಿಸುವ ವ್ಯಕ್ತಿತ್ವದ ರೀತಿ’ ಎಂಬುದಾಗಿ ಜನ ತಮ್ಮ ತಮ್ಮಲ್ಲೇ ಮಾತನಾಡುತ್ತಿರುತ್ತಾರೆ. ಹೀಗೆ ಕಾದಂಬರಿಯು ಮುಕ್ತಾಯಗೊಳ್ಳುವ ಮೂಲಕ ಡಾಂಭಿಕ ಜನರಿಗೆ ಮಾತ್ರ ಈ ಜಗತ್ತು ಹೇಗೆ ಕೀರ್ತಿ, ಹೆಸರು, ಹಣ ಸಾಮಾಜಿಕ ಮನ್ನಣೆ ತಂದುಕೊಡುತ್ತದೆ ಎಂಬ ವಿಪರ್ಯಾದ ಚಿತ್ರವನ್ನು ನೀಡುತ್ತದೆ. ಊರಿಗೆ ಅಂಟಿದ ಅಪರಂಜಿ ಎನ್ನುವಲ್ಲಿಯೇ ಲೇಖಕರು ಇಂತಹ ವ್ಯಕ್ತಿಗಳನ್ನು ವಿಡಂಬಿಸಿದ್ದಾರೆ. ಬೆಂಗಳೂರಿನ ರಾಜಲಕ್ಷ್ಮೀ ಪ್ರಕಾಶನವು 1986ರಲ್ಲಿ (ಪುಟ: 239) ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.

