ಕಾಡು ಹಾದಿಯ ಜಾಡು ಹತ್ತಿ (ಕಾತೀಕಾದಿತ್ಯ ಬೇಳ್ಗೋಡು) - Kartikaditya Belgodu
- Product Code: XN-KRT-BLG-514
- Availability: In Stock
- ₹100.00
₹90.00
ಕಾರ್ತಿಕಾದಿತ್ಯ ಬೆಳ್ಗೊಡು" ಅವರ "ಕಾಡು ಹಾದಿಯ ಜಾಡು ಹತ್ತಿ" ಅಪ್ಪಟ ಮಲೆನಾಡ ಸೊಬಗನ್ನು ವರ್ಣಿಸುವ ಪುಸ್ತಕ. ೧೨ ಪುಟ್ಟ ಪುಟ್ಟ ಕಥೆಗಳ ಸಂಗ್ರಹ. ಪ್ರತಿ ಕಥೆಯಲ್ಲೂ ಮಲೆನಾಡ ಜನರ ವೈವಿಧ್ಯಮಯ ವಿಷಯವನ್ನು ಲೇಖಕರು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಈ ಪುಸ್ತಕ ಓದುವಾಗ ನಾನು ಮತ್ತೆ ಮಗುವಾದೆ. ನನ್ನ ಬಾಲ್ಯ, ಕನ್ನಡ ಶಾಲೆಯ ನೆನಪೆಲ್ಲವೂ ಒಮ್ಮೆ ಕಣ್ಣ ಮುಂದೆ ಹಾದು ಹೋಯಿತು. ಅದೆಷ್ಟೋ ವಿಚಾರಗಳು ಕೇವಲ ಕಥೆಯಾಗಿದೆ ಮೌಲ್ಯವನ್ನು ಹೊಂದಿವೆ. ಕಥೆಯ ಮೂಲಕ ಜೀವನ ಮೌಲ್ಯಗಳನ್ನು ಸಾರುವ ಪ್ರಯತ್ನವನ್ನ ಲೇಖಕರು ಮಾಡಿದ್ದಾರೆ. ಈ ಹದಿನಾರು ಕಥೆಗಳಲ್ಲಿ ಕಾಡು ಹಾದಿಯ ಜಾಡು ಹತ್ತಿ ಕೂಡ ಒಂದು ಕಥೆ. ಇದು ನನಗೆ ತುಂಬಾ ಇಷ್ಟವಾದ ಕಥೆ ಕೂಡ ಹೌದು. ಕಾಡು,ನಾಡು,ಶಿಕಾರಿ,ಹಸಿರು ಎಲ್ಲವನ್ನೂ ಒಳಗೊಂಡ ಮಲೆನಾಡ ಪುಸ್ತಕವೆಂದರೆ ತಪ್ಪಲ್ಲ.

