Only ಪಾಲಿಟಿಕ್ಸ್(ಗೋಪಾಲಕೃಷ್ಣ ಕುಂಟಿನಿ) - Only Politics(Gopalakrishna Kuntini)
- Product Code: XN-OP-GK
- Availability: In Stock
- ₹200.00
₹180.00
ಮರುಭೂಮಿಯ ರಾಜ್ಯವೊಂದರ ರಾಜನಿಗೆ ಒಮ್ಮೆ ಒಂಟೆಗಳೆಲ್ಲಾ ನಕ್ಕಂತೆ ಕನಸು ಬೀಳುತ್ತದೆ. ಒಂಟೆಗಳೇಕೆ ನಕ್ಕವು?' ಎಂದು ರಾಜ ಪಂಡಿತರ ಸಭೆ ಕರೆದು ಕೇಳುತ್ತಾನೆ. ಒಂಟೆಗಳು ನಗುವುದಿಲ್ಲ, ನಗುವುದು ಮನುಷ್ಯರು ಮಾತ್ರಾ ದೊರೆಯೇ' ಎಂದು ಪಂಡಿತರು ಹೇಳುತ್ತಾರೆ. ರಾಜ, ಹಾಗಾದರೆ ನನ್ನ ರಾಜ್ಯದಲ್ಲಿ ನನ್ನ ಪ್ರಜೆಗಳೆಲ್ಲರೂ ನಗುತ್ತಾರೆಯೇ?' ಎಂದು ಅಚ್ಚರಿಯಿಂದ ಕೇಳುತ್ತಾನೆ. ಅದಕ್ಕೆ ಪಂಡಿತರು, ಮನುಷ್ಯರು ನಗುವುದು ಸಹಜ ಧರ್ಮ' ಎಂದು ವಿವರಿಸುತ್ತಾರೆ. ಮರುದಿನ ಮತ್ತೆ ಪಂಡಿತರ ಸಭೆ ಕರೆದ ರಾಜ, ಕಳೆದ ರಾತ್ರಿ ನನಗೆ ಕನಸಲ್ಲಿ ಪ್ರಜೆಗಳೆಲ್ಲಾ ಅತ್ತಂತೆ ಕಾಣಿಸಿತು' ಎಂದು ಹೇಳುತ್ತಾನೆ. ಪಂಡಿತರು, ಮನುಷ್ಯರು ಅಳುವುದೂ ಸಹಜಧರ್ಮ' ಎಂದು ವಿವರಿಸುತ್ತಾರೆ. ಮೂರನೇ ದಿನ ರಾಜ ಅದೇ ಪಂಡಿತರ ಸಭೆ ಕರೆದು ನನಗೆ ಕನಸಲ್ಲಿ ಪ್ರಜೆಗಳೆಲ್ಲಾ ನಕ್ಕಂತೆಯೂ, ಒಂಟೆಗಳೆಲ್ಲಾ ಅತ್ತಂತೆಯೂ ಕನಸು ಬಿತ್ತು' ಎಂದು ಹೇಳುತ್ತಾನೆ. ಈಗ ಪಂಡಿತರು ರಾಜನಿಗೆ ಒಂದು ಸಲಹೆ ನೀ���ುತ್ತಾರೆ, ರಾಜನೇ ಮೊದಲು ನೀನು ನಗಲು ಕಲಿ. ನಂತರ ಅಳಲು ಕಲಿ. ನಗು ಮತ್ತು ಅಳುವನ್ನು ಧಿಕ್ಕರಿಸಿದ ನೀನು ರಾಜ್ಯವನ್ನು ಹೇಗೆ ಆಳುವೆ? ನೀನು ನಕ್ಕರೆ ಒಂಟೆಗಳು ನಗಲಾರವು, ನೀನು ಅತ್ತರೆ ಪ್ರಜೆಗಳು ಅಳಲಾರರು.' ಈ ಪುಸ್ತಕ ಈ ಕಾಲದ ರಾಜ ಮತ್ತು ಪ್ರಜೆಗಳ ಕತೆಗಳ ಸಂಗ್ರಹ.

