ಲೇಖಕ ಜೋಗಿ ಅವರ ‘ಅಶ್ವತ್ಥಾಮನ್’ ಕೃತಿಯಲ್ಲಿ ಅನನ್ಯ ವ್ಯಕ್ತಿತ್ವದ ಕಥಾ ನಾಯಕನು ಪ್ರಸ್ತುತಕ್ಕೆ ಹೊಂದಲಾರದೆ ಮತ್ತೇನನ್ನೋ ಹುಡುಕ ಹೊರಟ ಅವನ ಮನಸ್ಸಿನಲ್ಲಾಗುವ ತಾಕಲಾಟವನ್ನು ಸರಳವಾಗಿ ನಿರೂಪಿಸಲಾಗಿದೆ. ಆತ್ಮಚರಿತ್ರಾತ್ಮಕ ಧಾಟಿಯಲ್ಲಿ ಕಾದಂಬರಿ ಇದ್ದರೂ ಅದು ಅಶ್ವತ್ಥಾಮನ ಚಲನಶೀಲವಾದ, ಸೃಜನಾತ್ಮಕತೆ ಓದುಗನಿಗೆ ಆಪ್ತಗೊಳಿಸುತ್ತದೆ. ವ್ಯಕ್ತಿತ್ವದ ಅಭಿವ್ಯಕ್ತಿಯೇ ಮುನ್ನೆಲೆಯಲ್ಲಿ ಕಾಣಿಸಿಕೊಳ್ಳಬೇಕು. ಆದರೆ, ವ್ಯಕ್ತಿಯೇ ವಿಜೃಂಭಿಸುತ್ತಿರುವ ಈ ಕಾಲಘಟ್ಟದಲ್ಲಿ ಮನುಷ್ಯನ ಒಳ ಜಗತ್ತನ್ನು ಅನಾವರಣಗೊಳಿಸುವ ಭಾವ ಭಿತ್ತಿ ಇದಾಗಿದೆ.

