ಆ ಹದಿನೆಂಟು ದಿನಗಳು(ನಾರಾಯಣಾಚಾರ್ಯ) | Aa Hadinentu Dinagalu(Narayanacharya K S)
- Product Code: XN-PRV-HD-NC
- Availability: In Stock
- ₹850.00
₹765.00
ಕಾದಂಬರಿ' ಎಂದೆನಲ್ಲವೆ? ಆಚಾರೈರು 'ಆ ಹದಿನೆಂಟು ದಿನಗಳ'ನ್ನೂ ಕಾದಂಬರಿಯಾಗಿಸಿಯೇ ನಮಗೆ ಅದರ ಸವಿಯುಣಿಸಿದ್ದಾರೆ. ರಾಮಾಯಣ-ಮಹಾಭಾರತಗಳ ಪಾತ್ರಪ್ರಪಂಚವನ್ನೂ ಕಾದಂಬರೀ ಚೌಕಟ್ಟಿನಲ್ಲಿಯ ಸವಿಕಟ್ಟಾಗಿ ನಿರೂಪಿಸಿದ್ದಾರೆ. ಆಚಾರ್ಯರದು ಇದೊಂದು ಹೊಸಬಗೆಯ (ನವ್ಯ ಶಬ್ದ ಬೇಡ!) ಕಾದಂಬರಿ, ಇತಿಹಾಸ, ಮಹಾಭಾರತಗಳನ್ನೆಲ್ಲಾ fiction ರೂಪದಲ್ಲಿ ರುಚಿಯಾಗಿ, ರಸವತ್ತಾಗಿ, ಶುಚಿಯಾಗಿ ಸಂಪದ್ಭರಿತವಾಗಿ ಸಾಹಿತ್ಯ ನಿರ್ಮಿತಿಮಾಡುವ ಅವರ ಈ ಸೃಜನಶೀಲಭಟ್ಟಿಯ ಒಂದು ಬಗೆಯ ಬಗೆ. ಇದಕ್ಕೆ ಯಾವ ಭಟ್ಟಂಗಿತನವೂ ಬೇಕಿಲ್ಲ. ಆಸ್ವಾದಿಸಿ ಮೆಚ್ಚುವ ಓದುಗಲೋಕಕ್ಕೆ ಭಟ್ಟಂಗಿತನ ಬೇಕಿಲ್ಲ.ಪ್ರವಾಸದಂತೆ ಸಾಗಿದೆ.

