ಶೃಂಗೇರಿ ಉಪಚಾರ(ಕೆ ಎನ್ ಗಣೇಶಯ್ಯ) - Sringeri Upachara(K N Ganeshaiah)
- Product Code: XN-SU-G
- Availability: In Stock
- ₹80.00
₹72.00
ನಗುನಗುತಾ ನಲೀ ನಲೀ - ಇದು ಜನಪ್ರಿಯ ಸಿನಿಮಾ ಹಾಡು. ನಗು ಆರೋಗ್ಯಕ್ಕೆ ಪೂರಕವಂತೆ - ಅತಿಯಾದರೆ ಮಾರಕವಂತೆ. ನಗೆಗಳಲ್ಲಿ ಬಗೆ ಬಗೆ. ಮಗುವಿನ ತಿಳಿನಗೆ ಆಪ್ಯಾಯಮಾನ. ವ್ಯಂಗ್ಯ-ತಿರಸ್ಕಾರ-ಅಟ್ಟಹಾಸದ ನಗೆ ಬೇಡವೇ ಬೇಡ. ಇನ್ನು ಕಾರನವೇ ಇಲ್ಲದೆ ನಗುವವರನ್ನು ಜನ ಬೇರೆಯೇ ರೀತಿ ನೋಡುತ್ತಾರೆ! ಇನ್ನು ಕೆಲವರಂತೂ ತುಟಿ ಬಿಗಿದುಕೊಂಡೇ ಭೂಮಿಗಿಳಿದಿರುತ��ತಾರೆ. ಎಂಥ ಘನ ಗಂಭೀರ ವಾತಾವರಣವಿರಲಿ, ಅಲ್ಲೊಂದು ನಗೆ ಬಾಂಬು ಬಿದ್ದರೆ ಯಾವ ಅನಾಹುತವೂ ಆಗದೆ, ಆಗಿರುವ ಘೋರ ಅನಾಹುತ ತಿಳಿಯಾಗುತ್ತದೆ. ಹೌದು, ಹಾಸ್ಯ ಅಪಹಾಸ್ಯ ಆಗಬಾರದು; ದ್ರೌಪದಿಯ ನಗೆಯಂತೆ ಕುರುಕ್ಷೇತ್ರವಾಗಬಾರದು. ನಗುವಿಗೂ-ನಗೆಪಾಟಲಿಗೂ ಅಜಗಜಾಂತರ ಇರಲಿ. ಇಲ್ಲವಾದರೆ ಕಾದಿದೆ ಗಂಡಾಂತರ! ಇದನ್ನೆಲ್ಲ ಚೆನ್ನಾಗಿ ತಿಳಿದುಕೊಂಡೇ ನಿಮ್ಮನ್ನು ನಗಿಸಲು ಪಣತೊಟ್ಟು ಗಣೇಶಯ್ಯ ಸಕಲ ಸಿದ್ಧತೆಯೊಂದಿಗೆ - ನಗೆಟಾನಿಕ್ಕಿನಲ್ಲಿ ನೈಟ್ರಸ್ ಆಕ್ಸೈಡ್ ಬೆರೆಸಿ, ಲೇಖನಗಳನ್ನಾಗಿಸಿ ಸನ್ನದ್ಧರಾಗಿದ್ದಾರೆ! ಇವನ್ನು ಓದಿ. ಖಂಡಿತ ನಗಬೇಡಿ. ಜೋಕೆ! ನಕ್ಕಿಲ್ಲವಾದರೆ ‘ನಗದು’ ಪ್ರಶಸ್ತಿ ನಿಮ್ಮದಾಗುತ್ತದೆ.

