ಚಲಂ(ರವಿ ಬೆಳಗೆರೆ) - Chalam(Ravi Belagere)
- Product Code: XN-C-RB
- Availability: In Stock
- ₹180.00
₹162.00
ತೆಲುಗಿನ ಪ್ರಸಿದ್ಧ ಲೇಖಕರಾದ ಗುಡಿಪಟಿ ವೆಂಕಟಾಚಲಂ ಅವರ ಜೀವನ ಚರಿತ್ರೆಯ ಕನ್ನಡಾನುವಾದ ಈ ಪುಸ್ತಕ. ತೆಲುಗಿನಲ್ಲಿ ತಮ್ಮ ಆತ್ಮ ಕಥೆಯನ್ನು ಬರೆದಿರುವಂತಹ ಚಲಂ ಅವರ ಜೀವನ ಮತ್ತು ಅವರು ಮಾಡಿದ ಸಾಹಿತ್ಯಕ ಮತ್ತು ಅವರ ಸಾಮಾಜಿಕ ಚಿಂತನೆಗಳನ್ನು ಸೊಗಸಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ ರವಿ ಬೆಳಗೆರೆ ಅವರು. ಸಮಾಜದಲ್ಲಿ ಮಹಿಳೆಯರು ಅನುಭವಿಸುವಂತಹ ಮಾನಸಿಕ ಮತ್ತು ಸಾಮಾಜಿಕ ನೋವುಗಳ ಕುರಿತು ಚಲಂ ಅವರ ಪುಸ್ತಕಗಳು ಬೆಳಕು ಚೆಲ್ಲುತ್ತಿದ್ದವು. ಸಮಾಜದಲ್ಲಿ ಮಹಿಳೆಯರು ಯಾವ ರೀತಿ ಧೈರ್ಯ ಗುಂದದೆ ಇಂತಹ ಸಮಸ್ಯೆಗಳನ್ನು ಎದುರಿಸಬೇಕು ಎಂದು ತಮ್ಮ ಪುಸ್ತಕಗಳಲ್ಲಿ ಚಲಂ ಅವರು ವಿಶ್ಲೇಷಿಸಿದ್ದಾರೆ. ಇಂತಹ ಓರ್ವ ವ್ಯಕ್ತಿಯ ಜೀವನ ಚರಿತ್ರೆಯ ಕನ್ನಡಾನುವಾದವನ್ನು ರವಿ ಬೆಳಗೆರೆಯವರು ಕನ್ನಡ ಸಾಹಿತ್ಯ ಪ್ರೀಯರಿಗೆ ನೀಡಿದ್ದಾರೆ. ತಮ್ಮ ಬದುಕಿನುದ್ದಕ್ಕೂ ವಿಭಿನ್ನ ವಿಚಾರಧಾರೆಯೊಂದಿಗೆ ಓದುಗರನ್ನು ಆಕರ್ಷಿಸಿದವರು ಚಲಂ ಅವರು. ಬ್ರಾಹ್ಮಣ್ಯದ ಸಕಲ ರೀತಿ ನೀತಿಗಳನ್ನು ಧಿಕ್ಕರಿಸಿ ಬದುಕಿದವರು ಚಲಂ. ಜನಿವಾರ ತ್ಯಜಿಸಿ ಮಾಂಸಾಹಾರವನ್ನು ಸೇವಿಸಲು ಆರಂಭಿಸಿದರು. ಎಲ್ಲಾ ಜಾತಿಯ ಜನರೊಂದಿಗೆ ಬೆರೆತರು. ಈ ಕಾರಣಕ್ಕೆ ಅವರನ್ನು ಬ್ರಾಹ್ಮಣ ಸಮಾಜದಿಂದ ಬ��ಿಷ್ಕರಿಸಲಾಯಿತಾದರೂ, ಅವರು ತಮ್ಮ ವಿಚಾರ ಧಾರೆಯನ್ನು ಬಿಟ್ಟು ಕೊಡಲಿಲ್ಲ. ಇಂತಹ ಉತ್ತಮ ಮೌಲ್ಯಗಳೊಂದಿಗೆ ಬದುಕಿದಂತಹ ವ್ಯಕ್ತಿಯ ಜೀವನ ಚರಿತ್ರೆ ಕನ್ನಡದ ಸಾಹಿತ್ಯ ಪ್ರೀಯರಿಗೆ ‘ಚಲಂ’ ರೂಪದಲ್ಲಿ ಲಭ್ಯವಿದೆ.

