WhatsApp ಮೂಲಕ ಸಂಪರ್ಕಿಸಿ
ಭಿತ್ತಿ-(ಎಸ್ ಎಲ್ ಭೈರಪ್ಪ)-Bitti-(S L Bhyrappa) ಸಾದಾ - Paperback

ಭಿತ್ತಿ-(ಎಸ್ ಎಲ್ ಭೈರಪ್ಪ)-Bitti-(S L Bhyrappa) ಸಾದಾ - Paperback

  • Product Code: XN-BTT-S-L
  • Availability: In Stock
  • ₹740.00
  • ₹666.00



ಕಲಾವಿದನ ಜೀವನಭಿತ್ತಿ ಮತ್ತು ಅವನ ಸೃಷ್ಟಿಗಳ ಪರಸ್ಪರ ಸಂಬಂಧ ರಹಸ್ಯಪೂರ್ಣವಾದುದು. ಜೀವನದ ಪರಿಮಿತಿಗಳನ್ನು ದಾಟಿ ಕೌತುಕಮಯ ವಲಯಕ್ಕೆ ಬೆಳೆಯದೆ ಕಲೆಯ ಆವಿರ್ಭವವಾಗುವುದಿಲ್ಲ. ಚಿತ್ರವು ಮೂಡಿದ ನಂತರ ಭಿತ್ತಿಯು ಇಲ್ಲದೆ ಆಗಿಬಿಡುತ್ತದೆ. ಕಲಾಕೃತಿಯನ್ನು ಅರಿಯಲು ವಾಸ್ತವಾವಾಗಿ ಜೀವನಚರಿತ್ರೆಯ ಅಗತ್ಯವಿಲ್ಲ. ಈ ನೆರವು ಆ ಅರಿವಿಗೆ ಬಾಧಕವೂ ಆಗಬಹುದು. ಆದರೆ ಕೃತಿಗಳನ್ನು ಓದಿ ಲೇಖಕನ ಜೀವನದ ಘಟನೆಗಳನ್ನು ಅನ್ಯರು ತಮ್ಮ ತಮ್ಮ ಇಚ್ಛೆಯಂತೆ ಕಲ್ಪಿಸಿಕೊಳ್ಳುವುದನ್ನು ತಪ್ಪಿಸಲೆಂದು ಕೆಲವು ಸ್ನೇಹಿತರು ಒತ್ತಾಯಿಸಿದ್ದರ ಫಲವಾಗಿ ಈ ಆತ್ಮವೃತ್ತಾಂತ ಮೂಡಿಬಂದಿದೆ. ಈ ಬರಹದ ನಂತರ ಭೈರಪ್ಪನವರು ಹೊಸತೊಂದು ಕಾದಂಬರಿಯನ್ನು ಬರೆದಿರುವುದು, ಆತ್ಮಚರಿತ್ರೆಯನ್ನು ಬರೆದರೆ ಅನುಭವದ ಬೀಜಗಳು ಹೊರಬಿದ್ದು ಸೃಜನಶೀಲತೆಯು ನಿಂತುಹೋಗಬಹುದೆಂಬ ಶಂಕೆಗೆ ಆಧಾರವಿಲ್ಲವೆಂಬುದನ್ನು ತೋರಿಸುತ್ತದೆ. ಸಾಹಿತಿಯ ಜೀವನದಲ್ಲಿ ಗುರುತಿಸಬಹುದಾದ ಅಂಶಗಳ ಹಂಗಿಲ್ಲದೆಯೂ ಸಾಹಿತ್ಯವು ಸೃಷ್ಟಿಯಾಗುತ್ತದೆ. ಅಂಥದನ್ನು ಸೃಷ್ಟಿಸುವುದೇ ಪ್ರತಿಭೆಯ ಗುರುತು.

There are no reviews for this product.

Write a review

Note: HTML is not translated!
Bad           Good