ಸಾರ್ಥ - Saartha(S L Bhyrappa) - ಸಾದ(Paperback)
- ₹360
ಸಾರ್ಥದ ಮರ್ಮವನ್ನು ತಿಳಿಯಲು ಮನೆ ಮಾರು ಬಿಟ್ಟುಹೋದ ನಾಗಭಟ್ಟನು ತನ್ನ ಗುರಿಯಿಲ್ಲದ ಸಂಚಾರಿಪರಿಕ್ರಮದಲ್ಲಿ ಜನಪದದ ಜೀವನಾಡಿಯಂತಿದ್ದ ಹತ್ತಾರು ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರವೃತ್ತಿಗಳ ಪ್ರಭಾವಕ್ಕೊಳಗಾಗಿ ಆಚ್ಚರಿಯ ಜೀವನದರ್ಶನಕ್ಕೆ ಸಾಕ್ಷಿಯಾಗುತ್ತಾನೆ .
‘ಸಾರ್ಥ’ ಕ್ರಿ .ಶ. ಎಂಟನೆಯ ಶತಮಾನದ ಭರತಖಂಡದಲ್ಲಿ ನಡೆಯಿತೆಂದು ಕಲ್ಪಿಸಿಕೊಳ್ಳಬೇಕಾದ ಸಂಗತಿಗಳನ್ನಾಧರಿಸಿದ ಕಾದಂಬರಿ. ಆನೆ ಕುದುರೆ ಹೇಸರಗತ್ತೆ ನೂರಾರು ಗಾಡಿಗಳ ಮೇಲೆ ವಾಣಿಜ್ಯ ಪದಾರ್ಥಗಳನ್ನು ಹೇರಿಕೊಂಡು ವ್ಯಾಪಾರ ಮಾಡುತ್ತ ದೂರ ದೂರ ದೇಶಗಳಲ್ಲಿ ಸಂಚರಿಸುವುದನ್ನು ಆ ಕಾಲದಲ್ಲಿ ‘ಸಾರ್ಥ’ ಎನ್ನುತಿದ್ದರು .ಭಾರತದ ಇತಿಹಾಸದ ಒಂದು ಸ್ಥಿತ್ಯಂತರ ಅವಧಿಯ ಈ ಕಾದಂಬರಿಯಲ್ಲಿ ಅಪೂರ್ವ ಅನುಭವ ಮತ್ತು ಪಾತ್ರಗಳು ಒಡಮೂಡಿವೆ. ಆಳವೂ ವಿಸ್ತಾರವೂ ಆದ ಐತಿಹಾಸಿಕ ಅಧ್ಯನಯದ ಅಡಿಪಾಯದ ಮೇಲೆ ಶಕ್ತ ಸೃಜನಶೀಲತೆಯು ಕೆಲಸಮಾಡಿ ಈ ವಿಶಿಷ್ಟ ಕಾದಂಬರಿಯನ್ನು ನಿರ್ಮಿಸಿದೆ .
ಭಾರತವು ಸತತವಾಗಿ ಎದುರಿಸುತ್ತಿರುವ ಧಾರ್ಮಿಕ ಸಂಘರ್ಷಗಳ ತಾತ್ತ್ವಿಕಬೇರುಗಳನ್ನು ‘ಸಾರ್ಥ’ ಸೃಜನಶೀಲವಾಗಿ ಅನ್ವೇಷಿಸುತ್ತದೆ.
Author | |
SL Bhyrappa | |
Publisher | |
Saahitya Bhandara |
Reviews
There are no reviews for this product.